
ಆರೋಗ್ಯಭಾಗ್ಯ
Sunday, June 12, 2011


ನೂರೆಂಟು ಕಾಮನೆಗಳನ್ನು ಕೆರಳಿಸುವ ಬಣ್ಣ

ಧೂಮಲೀಲೆ ತಡೆಗೆ ಮನೆಮದ್ದು

ಸಿಗರೇಟು ಬೀಡಿ ಸೇದುವುದನ್ನು ಬಿಡಿ ಎಂದು ಚಟ ಅಂಟಿಸಿಕೊಂಡವರಿಗೆ ತಿಳಿಯಹೇಳುವುದು ಕಷ್ಟಸಾಧ್ಯ. ಬುದ್ದಿ ಹೇಳಿದರೆ ಕೆಲವೊಮ್ಮೆ ಮಹಾಪರಾಧವೇ ಆಗುತ್ತದೆ!ಯಾಕೆಂದರೆ, ತಂಬಾಕು ಬುದ್ದಿ ಹೇಳುವವರಿಗಿಂತ ಹೆಚ್ಚು ಬುದ್ದಿವಂತ. ಧೂಮಪಾನದ ಚಟ ದೆವ್ವ ಹಿಡಿದಹಾಗೆ. ಮಾವು ಬೇವು ನಿಂಬೆ ಸೊಪ್ಪಿಗೆ ಅದು ಬೆದರುವುದಿಲ್ಲ. ತಾನೇ ತಾನಾಗಿ ಕಾಲಿಗೆ ಬುದ್ದಿಹೇಳಿ ಹೋಗುವವವರೆಗೂ ಚಟ ಬೆಳೆಸಿಕೊಂಡವರ ಬೆನ್ನು ಹತ್ತಿದ ಬೇತಾಳನಾಗಿ ಕಾಟಕೊಡುವುದು ಶತಸ್ಸಿದ್ಧ. ಆದರೂ ಸಹ ಧೂಮಪಾನ ಚಟವನ್ನು ಹೋಗಲಾಡಿಸಲು ಮಾರ್ಗೋಪಾಯಗಳು ಹಲವಾರಿವೆ. ಮೊದಲನೆಯದು ಆತ್ಮ ಬಲ ಅಂದರೆ ವಿಲ್ ಪವರ್, ಎರಡನೆಯದು ಔಷಧ. ಆಲೋಪತಿ, ಆಯುರ್ವೇದ, ಹೋಮಿಯೋಪತಿ ಮುಂತಾದ ಎಲ್ಲ ವೈದ್ಯಕೀಯ ಪದ್ದತಿಗಳಲ್ಲೂ ಧೂಮಪಾನ ತ್ಯಜಿಸುವುದಕ್ಕೆ ಔಷಧಗಳಿವೆ. ಔಷಧವನ್ನು ಸೇವಿಸಲು ಮನಸ್ಸಿರಬೇಕು, ಅದೇ ಮೊದಲ ಮದ್ದು. ಇವತ್ತು ಅಂದರೆ ಜುಲೈ 13ರ ಸೋಮವಾರ ಬೆಳಗ್ಗೆ 10 ಗಂಟೆಗೆ ಜೀ ಕನ್ನಡ ಚಾನೆಲ್ಲಿನಲ್ಲಿ ಒಂದು ಆರೋಗ್ಯ ಅಂಕಣ ಪ್ರಸಾರವಾಯಿತು. ಕಾರ್ಯಕ್ರಮದ ಇವತ್ತಿನ ವಿಶೇಷ - ಧೂಮಪಾನ ಚಟ ನಿವಾರಣೆಗೆ ಮನೆ ಮದ್ದು. ಡಾ. ಆದರ್ಶ ಎಂಬುವವರು ಅವರು ಹೇಳಿದ ಔಷಧ ರೆಸಿಪಿ ವಿವರಗಳನ್ನು ನಾನು ಬರೆದುಕೊಂಡೆ. ಅದು ಹೀಗಿವೆ. ಧೂಮಪಾನ ಮಾಡುವವರು ಸ್ವತಃ ಪ್ರಯೋಗ ಮಾಡಬಹುದು. ಅಥವಾ,
ಅವರ ಪರವಾಗಿ ರೋಗಿಗೆ ಅತ್ಯಂತ ಬೇಕಾದವರು ಅಂದರೆ, ಹೆಂಡತಿ, ಅಕ್ಕ, ತಂಗಿ, ಸ್ನೇಹಿತರು ಯಾರಾದರೂ ತಯಾರಿಸಬಹುದು.
ಬೇಕಾಗುವ ಪದಾರ್ಥ :
2-3 ಹಿಪ್ಪಲಿ ತುಂಡುಗಳು1/4 ಚಮಚ ಗಸಗಸೆ
1/4 ಕಲ್ಲು ಸಕ್ಕರೆ
1/2 ಚಮಚ ಟೀಪುಡಿ
ಮಾಡುವ ವಿಧಾನ: ಒಲೆಯ ಮೇಲಿನ ಪಾತ್ರೆಯಲ್ಲಿ ಗಸಗಸೆ ಮತ್ತು ಹಿಪ್ಪಲಿಯನ್ನು ಬಾಕಿ ಸ್ವಲ್ಪ ಬೆಚ್ಚಗೆ ಮಾಡಬೇಕು. ಆನಂತರ ಒಂದು ಲೋಟ ನೀರು ಹಾಕಿ ಕುದಿಸಬೇಕು. ಕುದಿಯುವ ನೀರಿಗೆ ಕಲ್ಲುಸಕ್ಕರೆ ಮತ್ತು ಟೀ ಪುಡಿ ಹಾಕಿ ಮತ್ತಷ್ಟು ಕುದಿಸಬೇಕು. ತಳ ಹತ್ತದಂತೆ ಸೌಟಿನಲ್ಲಿ ಕೈಯಾಡಿಸುತ್ತಿರಬೇಕು. ಈ ಕಷಾಯವನ್ನು ಸೋಸಿ ಆನಂತರ ಅದಕ್ಕೆ ಅರ್ಧ ನಿಂಬೆಹಣ್ಣಿನ ರಸ ಹಿಂಡಬೇಕು. ಈ ಕಷಾಯವನ್ನು ಬೆಳಗ್ಗೆ ಮಾಡಿ ಕುಡಿದ ಪಕ್ಷದಲ್ಲಿ ಸಿಗರೇಟು ಬೀಡಿ ಸೇದುವುದಕ್ಕೆ ಸಾಧ್ಯವೇ ಇಲ್ಲ. ತಂಬಾಕಿನ ವಾಸನೆ ಬಂದಾಕ್ಷಣ ವಾಕರಿಕೆ ಬಂದು ಸಿಗರೇಟು ಸೇದುವ ಆಸೆ ಕಮರಿಹೋಗುತ್ತದೆ. ಎಷ್ಟೋ ಮಂದಿ ಧೂಮಪಾನ ಚಟಕ್ಕೆ ಬಲಿಯಾಗಿ ಸೇದಲಾರದೆ ಬಿಡಲಾರದೆ ನರಳುತ್ತಿರುತ್ತಾರೆ. ಅಂಥವರು ಗಟ್ಟಿ ಮನಸ್ಸು ಮಾಡಿ ಈ ಔಷಧ ಮಾಡಿ ಕುಡಿದು ಧೂಮಪಾನ ಚಟಕ್ಕೆ ಗುಡ್ ಬೈ ಹೇಳಬಹುದು. ಶ್ವಾಸಕೋಸದ ಅರ್ಬುದ ರೋಗ ಹತ್ತಿರ ಸುಳಿಯದಂತೆ ತಮ್ಮ ಆರೋಗ್ಯ ಸಂರಕ್ಷಿಸಿಕೊಳ್ಳಬಹುದು
.
Monday, April 18, 2011
ಲೈಂಗಿಕತೆ ನಂಬಿಕೆಗಳು ಎಷ್ಟು ನಿಜ? ಎಷ್ಟು ಸುಳ್ಳು?
ಪ್ರೌಢಾವಸ್ಥೆಗೆ ಬಂದ ಯುವಕರ ಲೈಂಗಿಕಾಸಕ್ತಿ ಹಾಗೂ ಚಟಗಳು ಪರಸ್ಪರ ಕೈ ಕೈ ಹಿಡಿದು ಜೊತೆಜೊತೆಗೆ ಸಾಗುತ್ತವೆ. ಕುಂತರೂ, ನಿಂತರೂ, ನಡೆದಾಡುವಾಗಲೂ ಎಲ್ಲಾ ಸಮಯದಲ್ಲೂ ಸೆಕ್ಸ್ ಅನ್ನುವ ವೈರಸ್ ಅನ್ನು ತಲೆಯಲ್ಲಿ ತುಂಬಿಕೊಂಡರೆ ಕೊಂಚ ಅಸಹಜ ಹಾಗೂ ಮುಜುಗರ ಎನಿಸುತ್ತದೆ.
ಪುರುಷರಿಗೆ ಸದಾ ಅದೇ ಚಿಂತೆ ಎಂದು ನಿಮ್ಮ ಸಂಗಾತಿಗೆ ಬೇಸರ ತರಿಸಬಹುದು. ಮಾನಸಿಕವಾಗಿ ಆಕೆ ತತ್ತರಿಸುವಷ್ಟು ನಿಮ್ಮ ಉತ್ಕಟತೆ ನಿಮಗರಿವಿಲ್ಲದ್ದಂತೆ ಬೆಳೆದುಬಿಡುತ್ತದೆ. ನಿತ್ಯದ ಅಭ್ಯಾಸ ದಿನಕಳೆದಂತೆ ಚಟವಾಗಿ ಬಿಡುತ್ತದೆ. ಈ ರೀತಿ ಪುರುಷರ ಲೈಂಗಿಕಾವಸ್ಥೆಯ ನಂಬಿಕೆ, ಅಪನಂಬಿಕೆ, ಅಭ್ಯಾಸಗಳತ್ತ ಇಣುಕು ನೋಟ ಇಲ್ಲಿದೆ. ಇಲ್ಲಿರುವ ಸಂಗತಿಗಳು ಅಮೆರಿಕದ ವೈದ್ಯರೊಬ್ಬರ ಸಂಶೋಧನೆಯ ವರದಿಯಾದರೂ ಗಂಡಸರು ಎಲ್ಲೆಡೆ ಇದ್ದರೂ ಆ ವಿಷಯದಲ್ಲಿ ಎಲ್ಲರೂ ಒಂದೇ.
*ವಿವಾಹಿತರು vs ಅವಿವಾಹಿತರು : ವಿವಾಹಿತರಿಗೆ ಹೋಲಿಸಿದರೆ ಅವಿವಾಹಿತ ಪುರುಷರು ಉತ್ತಮ ಲೈಂಗಿಕ ಸುಖ ಅನುಭವಿಸುತ್ತಾರೆ ಎಂಬ ನಂಬಿಕೆಯಿದೆ. ಆದರೆ, ಸತ್ಯಕ್ಕೆ ದೂರವಾದ ಮಾತು. ಮದುವೆಯಾದ ಪುರುಷರಿಗೆ ಹೆಚ್ಚಿನ ಆತ್ಮವಿಶ್ವಾಸದಿಂದ ಸಂಗಾತಿಯೊಡನೆ ಬೆರೆತು ಸಂಭೋಗ ಸುಖ ಅನುಭವಿಸುವ ಅವಕಾಶವಿರುತ್ತದೆ ಎನ್ನುತ್ತದೆ ಸಮೀಕ್ಷೆ.
* ಪುರುಷರು ಹಾಗೂ ಲೈಂಗಿಕ ಕ್ರಿಯೆ: ಸಮೀಕ್ಷೆ ಪ್ರಕಾರ ಪುರುಷರು ಹಾಗೂ ಲೈಂಗಿಕಾಸಕ್ತಿ ಬಗ್ಗೆ ಕೆಲ ಮಹಿಳೆಯರು ಹೇಳುವುದು ಹೀಗೆ: ನಮ್ಮವರಿಗೆ ಒಂದು ರಾತ್ರಿ ಕೂಡಾ ಕಾಮನೆಗಳನ್ನು ಅದುಮಿಡಲು ಆಗುವುದಿಲ್ಲ. ಇದು ಒಂದು ರೀತಿ ವೈಜ್ಞಾನಿಕವಾಗಿ ಸಾಬೀತಾಗಿರುವ ವಿಷಯ. ನೆಚ್ಚಿನ ಸಂಗಾತಿ ಜೊತೆಗಿರುವಾಗ ಅಥವಾ ಆಕೆಯ ಬಗ್ಗೆ ಮನಸ್ಸು ಹರಿದ ಪ್ರತಿ 7 ಸೆಕೆಂಡಿಗೊಮ್ಮೆ ಆಕೆಯೊಡನೆ ಕಾಮಕೇಳಿ ಆಡುವ ಕನಸು ಪುರುಷರ ಮನದಲ್ಲಿ ಸುಳಿಯುತ್ತದಂತೆ. ಆದರೆ, ಪುರುಷರ ಈ ಅಸಹಜ ಉತ್ಕುಟತೆಯಿಂದ ಸಂಸಾರ ಸಾಂಗತ್ಯದಲ್ಲಿ ಬಿರುಕು ಮೂಡಬಹುದು. ಎಲ್ಲವೂ ದೈಹಿಕವಾಗಿ ಬಿಟ್ಟರೆ ಪ್ರೀತಿ ಪ್ರೇಮಕ್ಕೆ ಅರ್ಥವಿರುವುದಿಲ್ಲ ಎಂಬುದು ಪುರುಷರಿಗೆ ಸ್ವಲ್ಪ ನೆನಪಿದ್ದರೆ ಒಳಿತು.
* ಪುರುಷರು ಹಾಗೂ ಜನನಾಂಗ: ಲೈಂಗಿಕ ಶಿಕ್ಷಣದ ಕೊರತೆ, ಅರ್ಧಂಬರ್ಧ ತಿಳಿದ ಅಜ್ಞಾನಿಗಳ ಮಾತುಗಳು ಎಷ್ಟೋ ಪುರುಷರ ಜೀವನ ಹಾಳುಗೆಡಸಿಬಿಡುತ್ತದೆ. ಹಿರಿದಾದ ಬಲಿಷ್ಠವಾದ ಶಿಶ್ನ ಇದ್ದರೆ ಮಾತ್ರ ಉತ್ತಮ ಲೈಂಗಿಕ ಆನಂದ ಹೊಂದಳು ಸಾಧ್ಯ ಎಂಬ ಬಲವಾದ ನಂಬಿಕೆಯಲ್ಲಿ ಅರ್ಥವಿಲ್ಲ. ಇಂಚುಗಳ ಲೆಕ್ಕ, ಉದ್ರೇಕಗೊಂಡ ಜನನಾಂಗ ಪಾದಕ್ಕೆ ಸಮಾನಂತರವಾಗಿ ಹೊಂದಬೇಕು, ಇಷ್ಟು ಗಾತ್ರವಿದ್ದರೆ ಮಾತ್ರ ಕಾಮಕ್ರೀಡೆಯಲ್ಲಿ ಜಯ ಎಂಬ ಆಧಾರ ರಹಿತ ಮಾಹಿತಿಯನ್ನು ತಲೆಯಲ್ಲಿ ತುಂಬಿಕೊಳ್ಳುವುದನ್ನು ಬಿಟ್ಟುಬಿಡಿ. ಜನನಾಂಗ ಹಿಗ್ಗುವಿಕೆಯಿಂದ ಮಾತ್ರ ಕಾಮ ತೃಪ್ತಿ ಸಾಧ್ಯ ಎಂಬ ನಂಬಿಕೆ ಇನ್ನೂ ಹೋಗದಿದ್ದರೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಗುಳಿಗೆ ಅಗ್ಗದ ನುಂಗಿ ಒಂದೇ ರಾತ್ರಿಯಲ್ಲಿ ಬಲಭೀಮನಂತೆ ಕುಸ್ತಿಗೆ ಇಳಿಯಬೇಡಿ.
* ವೀರ್ಯಾಣು ಹಾಗೂ ಕ್ಯಾಲೋರಿ ಸಮಸ್ಯೆ: ವೀರ್ಯಾಣು ನಾಶದಿಂದ ನಿಃಶಕ್ತಿ, ಮಾನಸಿಕ ಅಸ್ಥಿರತೆ ಇದು ಅವಿವಾಹಿತ ಯುವಕರನ್ನು ಕಾಡುತ್ತದೆ. ಆದರೂ, ಅನಿಯಮಿತವಾಗಿ ಹಸ್ತಮೈಥುನ ನಿಲ್ಲದೆ ಸಾಗುತ್ತಿರುತ್ತದೆ. ಒಳಗೊಳಗೆ ಕೊರಗುತ್ತಿರುತ್ತಾರೆ. ವೀರ್ಯಾಣು ನಾಶದಿಂದ ದೈಹಿಕವಾಗಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಒಂದು ಹನಿ ವೀರ್ಯಾಣು ಉತ್ಪಾದನೆಗೆ ಒಂದಿಷ್ಟು ಪ್ರೋಟಿನ್, 40 ಹನಿ ರಕ್ತ ಸಾಕು. ಆದರೆ, ಇವಿಷ್ಟು ಒಂದೆರಡು ಬ್ರೆಡ್ ಪೀಸ್ ಸೇವನೆಯಲ್ಲೇ ಸಿಗುತ್ತದೆ. ಆದ್ದರಿಂದ ವೀರ್ಯ ನಾಶದ ಭಯಬೇಡ. ಆದರೆ, ಅನಗತ್ಯವಾಗಿ ಮನಸ್ಸು ಕಾಮಪ್ರಚೋದನೆಗೊಳ್ಳುವುದನ್ನು ನಿಯಂತ್ರಿಸುವುದು ಅಗತ್ಯ.
ಕ್ಯಾಲೋರಿ ಸಮಸ್ಯೆ: ಇದು ಸ್ವಲ್ಪ ವಿಚಿತ್ರ ಎನಿಸಬಹುದು. ನಿಮ್ಮ ಸಂಗಾತಿ ದಪ್ಪಗಾಗಬೇಕೆ. ವೀರ್ಯ ಸೇವನೆ ಅತ್ಯುತ್ತಮ ಆಹಾರ ಏಕೆಂದರೆ ವೀರ್ಯದಲ್ಲಿ ಹೆಚ್ಚಿನ ಕ್ಯಾಲೋರಿ ಇರುತ್ತದೆ ಎಂಬ ವಿಚಿತ್ರ ನಂಬಿಕೆ ಪುರುಷರಲ್ಲಿ ಮನೆ ಮಾಡಿದೆ. ಇದಕ್ಕೆ ಯಾವುದೇ ಆಧಾರವಿಲ್ಲ. ವೀರ್ಯದಲ್ಲಿ ವಿಟಮನ್ ಸಿ, ನೀರು, ಖನಿಖ, ಕ್ಯಾಲ್ಸಿಯಂ ಹಾಗೂ ಮೆಗ್ನೇಶಿಯಂ ಅಲ್ಲದೆ ಪ್ರೊಟೀನ್ ಇದೆಯಾದರೂ ವೀರ್ಯ ಸೇವನೆಯಿಂದ ಕ್ಯಾಲೋರಿ ಹೆಚ್ಚಳವಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಲೀಟರ್ ಗಟ್ಟಲೆ ಪುರುಷರ ವೀರ್ಯವನ್ನು ಮಹಿಳೆಯರು ಸೇವಿಸಿದರು ಸ್ಥೂಲಕಾಯರಾಗಲು ಸಾಧ್ಯವಿಲ್ಲ.
- ಅನಂಗ
Tuesday, March 8, 2011
ಹಲ್ಲುಗಳ ಆರೋಗ್ಯ ಕಾಪಾಡಲು ಆರು ಟಿಪ್ಸ್
ನೀವು ನಕ್ಕಾಗ ಹೊಳೆಯುವ ದಂತಪಂಕ್ತಿಗಳು ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುತ್ತವೆ. ಸುಂದರ ನಗುವಿಗೆ ಕಾರಣವಾಗುತ್ತದೆ. ಕ್ಷಮಿಸಿ, ಇದು ಯಾವುದೇ ಟೂಥ್ ಪೇಸ್ಟ್ ಜಾಹೀರಾತಲ್ಲ. ಮಾರುಕಟ್ಟೆಯಲ್ಲಿಂದು ಸಾವಿರಾರು ಕೃತಕ ಡೆಂಟಲ್ ಕೇರ್ ಉತ್ಪನ್ನಗಳು ಬರುತ್ತಿವೆ. ಆದರೆ ನಾವು ಹೇಳಹೊರಟದ್ದು ನೀವು ಮನೆಯಲ್ಲಿಯೇ ಮಾಡಬಹುದಾದ ನೈಸರ್ಗಿಕ ಡೆಂಟಲ್ ಕೇರ್ ಬಗ್ಗೆ. ಹಲ್ಲು, ಒಸಡು, ಬಾಯಿಯ ಆರೈಕೆಗೆ ಇದಕ್ಕಿಂತ ಬೆಸ್ಟ್ ಉಪಾಯ ಯಾವುದಿದೆ?
ಚಂದದ ನಗುವಿಗೆ ಇಲ್ಲಿದೆ ಟಿಪ್ಸ್
1. ಲವಂಗ : ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟಿರಿಯಾ ಹೊಡೆದೊಡಿಸಿ ಹಲ್ಲನ್ನು ಸುರಕ್ಷಿತವಾಗಿಡಲು ಲವಂಗ ಬಳಸಿ. ಇದು ಆಂಟಿ-ಬ್ಯಾಕ್ಟಿರಿಯಾ ಗುಣಹೊಂದಿದ್ದು ಬಾಯಿಯ ಕೆಟ್ಟ ವಾಸನೆಯನ್ನೂ ಹೋಗಲಾಡಿಸುತ್ತದೆ. ಪ್ರತಿ ಬಾರಿ ಊಟ ಮಾಡಿದ ನಂತರ ಒಂದು ಲವಂಗವನ್ನು ಬಾಯಿಯೊಳಗೆ ಇಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ. ಹಲ್ಲು ನೋವಿಗೆ ಲವಂಗದ ಎಣ್ಣೆ ಉತ್ತಮ ಔಷಧಿ.
2. ಟೂಥ್ ಪೇಸ್ಟ್ : ಮನೆಯಲ್ಲಿಯೇ ಟೂಥ್ ಪೇಸ್ಟ್ ತಯಾರಿಸಿ. ಹೇಗೆ ಮಾಡುವುದೆಂದು ಕೇಳುತ್ತಿದ್ದೀರಾ? ಅಡುಗೆ ಸೋಡಾ 6 ಚಮಚ, 1/3 ಚಮಚ ಉಪ್ಪು, 4 ಚಮಚ ಗ್ಲಿಸರಿನ್ ಮತ್ತು 15 ಹನಿ ಪೆಪ್ಪರ್ ಮಿಂಟ್ ಎಣ್ಣೆಯನ್ನು ಸರಿಯಾಗಿ ಪೇಸ್ಟ್ ಆಗುವರೆಗೆ ಮಿಕ್ಸ್ ಮಾಡಿಟ್ಟುಕೊಳ್ಳಿ. ಪೇಸ್ಟ್ ರೆಡಿ. ಇದನ್ನು ದಿನಾ ಬಳಸುತ್ತಿದ್ದರೆ ನಿಮಗೆ ಆಶ್ಚರ್ಯವಾಗುವಂತೆ ಹಲ್ಲು ಶುಭ್ರವಾಗುತ್ತದೆ. ಇದು ಬಾಯಿಯೊಳಗಿನ ಕ್ರಿಮಿಗಳನ್ನೂ ನಾಶಪಡಿಸುತ್ತದೆ. ಪ್ರತಿದಿನ ಎರಡು ಬಾರಿ ಹಲ್ಲು ಉಜ್ಜುವುದನ್ನು ಮಾತ್ರ ಮರೆಯಬೇಡಿ.
3. ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ : ದಿನಕ್ಕೊಮ್ಮೆ ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ ನಿಂದ ಬಾಯಿ ಮುಕ್ಕಳಿಸಿ. ಇದರಿಂದ ಒಸಡಿನ ತೊಂದರೆಗಳು ನಿವಾರಣೆಯಾಗುತ್ತದೆ. ಹಲ್ಲು ಕೂಡ ಬಲಿಷ್ಠವಾಗುತ್ತವೆ.
4. ಬೇವಿನ ಕಡ್ಡಿ : ಬಾಯಿಯೊಳಗಿನ ಬ್ಯಾಕ್ಟಿರಿಯಾ ಹೋಗಲಾಡಿಸಲು ಬೇವಿನ ಕಡ್ಡಿಯಿಂದ ಹಲ್ಲುಜ್ಜಿ. ಬೇವಿನ ಕಡ್ಡಿ ಜಗಿಯುವುದರಿಂದ ಹಲ್ಲು ಸದೃಢವಾಗುತ್ತವೆ. ಇದರಿಂದ ಹಲ್ಲು ಹುಳುಕಾಗುವುದು ಕೂಡ ತಪ್ಪುತ್ತದೆ. ಆರಂಭದಲ್ಲಿ ಕಹಿಎನಿಸಬಹುದು. ಆದರೆ ರೂಢಿಯಾಗುವವರೆಗೆ, ಅಷ್ಟೆ.
5. ಮೂಲಂಗಿ ಎಲೆ : ಮೂಲಂಗಿ ಎಲೆ ಕೂಡ ಹಲ್ಲಿನ ಆರೋಗ್ಯಕ್ಕೆ ಸಹಕಾರಿ. ಮೂಲಂಗಿ ಎಲೆ ಜಗಿಯುವುದು ಅಥವಾ ಅದರ ಜ್ಯೂಸ್ ಮಾಡಿ ಕುಡಿಯುವುದು ಹಲ್ಲಿಗೆ ಒಳ್ಳೆಯದು. ಮಾರುಕಟ್ಟೆಗೆ ಹೋದಾಗ ಮೂಲಂಗಿ ಜೊತೆಗಿರುವ ಎಲೆಯನ್ನು ಎಸೆಯಬೇಡಿ. ಎಲೆಯನ್ನು ಹಸಿ ಈರುಳ್ಳಿ ಜೊತೆ ಸಣ್ಣಗೆ ಹೆಚ್ಚಿ ಉಪ್ಪು, ನಿಂಬೆರಸ ಬೆರೆಸಿ ಪಚಡಿ ಮಾಡಿ ತಿನ್ನಬಹುದು. ಹೊಟ್ಟೆಗೂ ಇದು ಒಳ್ಳೆಯದು.
6. ಕ್ಯಾಲ್ಸಿಯಂ : ಕ್ಯಾಲ್ಸಿಯಂ ಜಾಸ್ತಿಯಿರುವ ಆಹಾರದಿಂದ ಹಲ್ಲು ಮತ್ತು ಒಸಡು ಹೆಚ್ಚು ಆರೋಗ್ಯಪೂರ್ಣವಾಗುತ್ತದೆ. ಅದಕ್ಕಾಗಿ ಕಾಳು, ಹಣ್ಣು ತರಕಾರಿಗಳು, ಕೋಳಿ ಮೊಟ್ಟೆ ಮತ್ತು ಡೈರಿ ಉತ್ಪನ್ನಳು ಇತ್ಯಾದಿ ಕ್ಯಾಲ್ಸಿಯಂ ಅತ್ಯಧಿಕವಿರುವ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.
ಈ ಆರು ಟಿಪ್ಸ್ ಮೂಲಕ ನೀವು ಮನೆಯಲ್ಲಿಯೇ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮಗೆ ನೀವೇ ಡೆಂಟಿಸ್ಟ್ ಆಗಿ. ಇನ್ನೊಂದು ಮಾತು ನೆನಪಿಡಿ. ಆರೋಗ್ಯಕರ ಹಲ್ಲುಗಳು ಹೃದಯಬೇನೆ ಮುಂತಾದ ಅನಾರೋಗ್ಯದಿಂದಲೂ ಕಾಪಾಡುತ್ತವೆ
ಬೇಸಿಗೆಯಲ್ಲಿ ನೈಸರ್ಗಿಕವಾಗಿ ತ್ವಚೆ ಸಂರಕ್ಷಣೆ
ಬೇಸಿಗೆಯಲ್ಲಿ ತ್ವಚೆ ಸಂರಕ್ಷಣೆ ಎಲ್ಲರೂ ಅನುಭವಿಸುವ ಕಷ್ಟ. ದುಬಾರಿ ಕ್ರೀಮ್, ಲೋಶನ್, ಫೇಸ್ ಪ್ಯಾಕ್ ಬಳಸಲು ಸಾಧ್ಯವಾಗದ ಜನ ಸಾಮಾನ್ಯರಿಗೆ ಸುಲಭ ರೀತಿಯಲ್ಲಿ ಚರ್ಮ ರಕ್ಷಣೆ ಮಾಡಿಕೊಳ್ಳಬಹುದಾದ ವಿಧಾನ ಇಲ್ಲಿದೆ. ಲಭ್ಯವಿರುವ ತರಕಾರಿ, ಹಣ್ಣುಗಳ ಸಹಾಯದಿಂದ ಮುಖದ ತ್ವಚೆಯನ್ನು ಮೃದುವಾಗಿ ಹೊಳೆಯುವಂತೆ ಮಾಡಿಕೊಳ್ಳಬಹುದು. ಸೈಡ್ ಎಫೆಕ್ಟ್ ಭಯವಿಲ್ಲದೆ ನೈಸರ್ಗಿಕ ವಿಧಾನ ಬಳಕೆಯಿಂದ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಒಂದಿಷ್ಟು ಸಮಯ ವ್ಯಯಿಸಿದರೆ ಸಾಕು.
ದಿನ ನಿತ್ಯ ಬಳಸುವ ತರಕಾರಿ ಹಾಗೂ ಹಣ್ಣುಗಳಾದ ಸೌತೆಕಾಯಿ, ಸೇಬು ಹಣ್ಣು, ಎಲೆಕೋಸು, ಕಿತ್ತಲೆ, ತೆಂಗಿನಕಾಯಿ, ಟೊಮಾಟೋ, ಕಲ್ಲಂಗಡಿ ಹಣ್ಣು, ಕ್ಯಾರೆಟ್, ಆಲೂಗೆಡ್ಡೆ, ದ್ರಾಕ್ಷಿ, ಪಪ್ಪಾಯ ಮುಂತಾದವುಗಳು ನೈಸರ್ಗಿಕವಾಗಿ ತ್ವಚೆ ಸಂರಕ್ಷಣೆಯ ಸಾಧನಗಳಾಗಿ ಪರಿವರ್ತನೆಗೊಳಿಸಿ ಬಳಸಬಹುದು.
ಸೌತೆಕಾಯಿ ರಸ: ಚಿಕ್ಕ ಎಳೆ ಸೌತೆಕಾಯಿ ತೆಗೆದುಕೊಂಡು ಸಿಪ್ಪೆ ತೆಗೆದು, ಚೆನ್ನಾಗಿ ಹಿಚುಕಿ ರಸ ತೆಗೆಯಿರಿ. 1/4 ಭಾಗ ರೋಸ್ ವಾಟರ್ ಹಾಗೂ ನಿಂಬೆ ರಸ ಬೆರೆಸಿ. ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಣ್ಣೀರಲ್ಲಿ ಮುಖ ತೊಳೆದುಕೊಳ್ಳಿ. ಇದರಿಂದ ಮಂಕಾದ, ಜಿಡ್ಡು ಜಿಡ್ಡಾದ ಮುಖವು ಹೊಸ ಕಾಂತಿ ಪಡೆಯುತ್ತದೆ.
ಫೇಸ್ ಪ್ಯಾಕ್ ಶುದ್ಧೀಕರಣ: 1/4 ಟೀ ಚಮಚ ನಿಂಬೆ ರಸವನ್ನು 1 ಟೀ ಚಮಚ ಹಾಲು ಹಾಗೂ ಸೌತೆ ರಸದೊಂದಿಗೆ ಸಮವಾಗಿ ಬೆರೆಸಿ ಮುಖ ಹಾಗೂ ಕುತ್ತಿಗೆಯ ಭಾಗದಲ್ಲಿ ಹಚ್ಚಿಕೊಳ್ಳಿ. ಸುಮಾರು 14 ನಿಮಿಷದ ನಂತರ ಮುಖ ಮಾರ್ಜನ ಮಾಡಬಹುದು.
ಎಲೆಕೋಸು ಮಾಸ್ಕ್: ಎಲೆಕೋಸಿನ ಕೆಲವು ಎಲೆಗಳನ್ನು ಅರೆದು ರಸ ತೆಗೆದುಕೊಳ್ಳಿ. ಅದಕ್ಕೆ 1/4 ಚಮಚ ಈಸ್ಟ್ ಬೆರೆಸಿ, 1 ಟೀ ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಕಿರಿ. ಗಟ್ಟಿಯಾಗಿ ಪೇಸ್ಟ್ ತಯಾರಿಸಿಕೊಂಡು ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಲೇಪಿಸಿರಿ. 15 ನಿಮಿಷದ ನಂತರ ನೀರಿನಲ್ಲಿ ಹತ್ತಿಯನ್ನು ಅದ್ದಿಕೊಂಡು ಮಾಸ್ಕ್ ಅನ್ನು ನಿಧಾನವಾಗಿ ಒರೆಸಿಕೊಳ್ಳಿ. ಈ ಕ್ರಮದಿಂದ ಮುಖದ ಸುಕ್ಕು, ಒಣ ತ್ವಚೆ ದೂರವಾಗಿ ಹೂವಿನಂತೆ ಅರಳುವುದು.
ಕಿತ್ತಲೆ ರಸ ಪ್ರಯೋಗ: ಕೆಲ ಬಾದಾಮಿಗಳನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಅದಕ್ಕೆ 2 ಟೀ ಚಮಚ ಹಾಲು ಮತ್ತು 1 ಟೀ ಚಮಚ ಕ್ಯಾರೆಟ್ ಹಾಗೂ ಕಿತ್ತಲೆ ರಸ ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಕಲಕಿ ನಂತರ ಮುಖಕ್ಕೆ ಲೇಪಿಸಿಕೊಂಡು ಸುಮಾರು ಅರ್ಧ ಗಂಟೆ ಕಾಲ ವಿಶ್ರಮಿಸಿ. ಇದರಿಂದ ಮುಖದಲ್ಲಿರುವ ಕಲೆಗಳು ದೂರವಾಗಿ, ತ್ವಚೆ ಮೃದುವಾಗಿ ಗೋಚರಿಸುತ್ತದೆ.
ಟೊಮಾಟೋ ಲೋಷನ್: 1 ಟೀ ಚಮಚ ಟೊಮಾಟೋ ರಸಕ್ಕೆ ಕೆಲ ಹನಿ ನಿಂಬೆ ರಸ ಬೆರೆಸಿ, 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿಕೊಂಡರೆ ಮುಖದಲ್ಲಿ ಉಂಟಾದ ಸೂಕ್ಷ್ಮರಂಧ್ರಗಳು ಕೂಡಾ ಮುಚ್ಚಲ್ಪಡುತ್ತವೆ. ಮೃದುವಾದ ಆಲೂಗೆಡ್ಡೆ ತುಂಡುಗಳನ್ನು ಹೆಚ್ಚಿಕೊಂಡಿ ನೇರವಾಗಿ ಮುಖಕ್ಕೆ ಬಳಿದುಕೊಳ್ಳಬಹುದು. ಅಥವಾ ಆಲೂಗೆಡ್ಡೆ ರಸವನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿಕೊಂಡು ದಿನವಿಡೀ ಹಾಗೆ ಬಿಟ್ಟು ನಂತರ ತೊಳೆದುಕೊಳ್ಳಬಹುದು.
ಕಲ್ಲಂಗಡಿ ಹಣ್ಣು : ಸಣ್ಣ ಕಲ್ಲಂಗಡಿ ಹಣ್ಣು ತೆಗೆದುಕೊಂಡು, ಬೀಜಗಳನ್ನು ಎಸೆದು ರಸ ತೆಗೆದುಕೊಳ್ಳಿ. ಕುತ್ತಿಗೆ ಹಾಗೂ ಮುಖದ ಚರ್ಮಕ್ಕೆ 15 ನಿಮಿಷ ಲೇಪಿಸಿ, ನಂತರ ಮುಖ ತೊಳೆದುಕೊಳ್ಳಿ. ಈ ಲೋಷನ್ ನಿಂದ ಮುಖದ ಕಾಂತಿ ಹೆಚ್ಚುತ್ತದೆ.
ಕ್ಯಾರೆಟ್ ಲೋಷನ್ : 1/4 ಟೀ ಚಮಚ ಕ್ಯಾರೆಟ್ ರಸಕ್ಕೆ 1 ಟೀ ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಲೇಪಿಸಿ. 15 ನಿಮಿಷಗಳ ನಂತರ ಸೋಡಾ ಬೈಕಾರ್ಬೊನೇಟ್ ಬೆರೆಸಿದ ನೀರಿನಲ್ಲಿ ಹತ್ತಿಯನ್ನು ಅದ್ದಿ ಮುಖವನ್ನು ಒರೆಸಿಕೊಳ್ಳಿ. ಇದರಿಂದ ತ್ವಚೆ ಮೃದುವಾಗಿ ನಳನಳಿಸುತ್ತದೆ.
ಟೊಮಾಟೋ ರಸ : 2 ಟೀ ಚಮಚ ಟೊಮಾಟೊ ರಸಕ್ಕೆ 4 ಟೇಬಲ್ ಚಮಚ ಮಜ್ಜಿಗೆ ಬೆರೆಸಿ ಮುಖಕ್ಕೆ ಹಚ್ಚಿ ಸುಮಾರು ಅರ್ಧ ಗಂಟೆಗಳ ಕಾಲ ವಿರಾಮಿಸಿ. ಇದು ಸನ್ ಬರ್ನ್ ನಿಂದ ಉಂಟಾಗುವ ಕಿರಿಕಿರಿಯನು ತಪ್ಪಿಸುತ್ತದೆ.
ಸೇಬು ಹಣ್ಣು ಟಾನಿಕ್: 1 ಟೇಬಲ್ ಚಮಚ ಸೇಬು ಹಣ್ಣಿನ ರಸಕ್ಕೆ 1/4 ಟೀ ಚಮಚ ನಿಂಬೆ ರಸ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿಕೊಂಡು ನಂತರ ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಮುಖ ಹೊಳೆಯುತ್ತದೆ.
ಇದೇ ಕ್ರಮದಲ್ಲಿ ದ್ರಾಕ್ಷಿ ರಸವನ್ನು 15 ನಿಮಿಷಗಳ ಕಾಲ ಹಚ್ಚಿಕೊಳ್ಳುವುದರಿಂದ ತ್ವಚೆ ಮೃದುವಾಗುತ್ತದೆ. 1 ಟೇಬಲ್ ಚಮಚ ಪಪ್ಪಾಯ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಗಳು ದೂರಾಗುತ್ತವೆ. ತೆಂಗಿನ ಕಾಯಿ ನೀರಿನಿಂದ ಮುಖ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಇನ್ನೂ ಅನೇಕ ತರಕಾರಿ ಹಾಗೂ ಹಣ್ಣುಗಳನ್ನು ಬಳಸಿಕೊಂಡು ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.
Subscribe to:
Posts (Atom)