ನಿಮ್ಮ ಮನದನ್ನೆ(ಹೆಂಡತಿ ಅಂತ ಓದಿಕೊಳ್ಳಿ)ಯನ್ನು ಮೆಚ್ಚಿಸುವುದು ಹೇಗೆ? ಇದು ಯಾವುದೇ ಗಂಡಸಿಗಾಗಲಿ ಮಿಲಿಯನ್ ಡಾಲರ್ ಪ್ರಶ್ನೆ. ಆದರೂ, ಜೀವನರಥ ಸುಗಮವಾಗಿ ಸಾಗುತಿರಬೇಕಾದರೆ ಪ್ರಯತ್ನ ಸತತವಾಗಿ ಸಾಗುತ್ತಿರಲೇಬೇಕು. ಸುಖ ಸಂಸಾರಕ್ಕೆ 12 ಸೂತ್ರಗಳು ಸಾಕಾಗಲಿಕ್ಕಿಲ್ಲವೆಂದು ಮತ್ತು ನಿಮ್ಮ ಸಂಸಾರದಲ್ಲಿಯೂ ಸರಿಗಮವಿರಲೆಂದು ಎರಡು ಡಜನ್ ಸೂತ್ರಗಳನ್ನು ಇಲ್ಲಿ ನೀಡಲಾಗಿದೆ. ಇವುಗಳಲ್ಲಿ ಕೆಲವು ನಿಮಗೆ ಕ್ರೇಜಿ ಅನ್ನಿಸಬಹುದು, ಹಲವು ಸೂತ್ರಗಳನ್ನು ನೀವೀಗಾಗಲೆ ಬಳಸಿ ಸೋತಿರಬಹುದು ಅಥವಾ ಗೆದ್ದಿರಬಹುದು. ಕೆಲವು ವರ್ಕ್ ಔಟ್ ಆಗೋದೆ ಇಲ್ಲ ಅನ್ನುವಂಥವೂ ಸಖತ್ ಕೆಲಸ ಮಾಡಬಹುದು. ಹೆಣ್ಣಿನ ಮನಸ್ಸನ್ನು ಬಲ್ಲವರಾರು?
1) ನೀನು ಸುಂದರಿ ಎಂದು ಆಕೆಗೆ ಆಗಾಗ ಹೇಳುತ್ತಿರಿ.2) ದಿನದಲ್ಲಿ ಒಂದು ಕ್ಷಣಕ್ಕಾದರೂ ಆಕೆಯ ಕೈಗಳನ್ನು ಹಿಡಿದುಕೊಳ್ಳಿ.3) ಮುನಿಸಿಕೊಂಡಾಗ ಆಕೆಯನ್ನು ಹಿಂಭಾಗದಿಂದ ಅಪ್ಪಿಕೊಂಡು, ಮುದ್ದಿನಿಂದ ಚುಂಬಿಸಿ.4) ಆಕೆಯ ಧ್ವನಿ ಸಂದೇಶಗಳನ್ನು ಅಲಾರ್‍ಮ್ ಆಗಿ ಇಟ್ಟುಕೊಳ್ಳಿ.5) ಆಕೆ ನಿಮ್ಮೊಂದಿಗಿಲ್ಲದಾಗ ಹೊರಗೆ ಹ್ಯಾಂಗ್ ಔಟ್ ಆಗಲು ಹೋಗಬೇಡಿ. ಆಕೆ ಹರ್ಟ್ ಆಗಬಹುದು.6) ಬರೀ ಹಾಯ್ ಅನ್ನಲೂ ಆಕೆಗೆ ಕರೆ ಮಾಡಿ.7) ನಿಮ್ಮ ಸ್ನೇಹಿತರಿಗೆ ಈಕೆ ನಿಮ್ಮ ಗರ್ಲ್ ಫ್ರೆಂಡ್ ಎಂದು ಪರಿಚಯಿಸಿ.8) ವಿಶ್ರಾಂತಿ ತೆಗೆದುಕೊಳ್ಳುವಾಗ ಆಕೆಯ ತಲೆ ಕೂದಲಿನೊಂದಿಗೆ ಆಟವಾಡಿ.9) ಆಕೆಯನ್ನು ಕಚೇರಿಗೆ ಬಿಡುವುದು, ಕರೆದುಕೊಂಡು ಬರುವುದನ್ನು ರೂಢಿಸಿಕೊಳ್ಳಿ.10) ಸಮಯ ಸಿಕ್ಕಾಗಲೆಲ್ಲ ಜೋಕುಗಳನ್ನು ಸಿಡಿಸಿ ನಗುವಂತೆ ಮಾಡಿ.11) ಆಕೆಗೆ ನಿಮ್ಮ ತೋಳುಗಳಲ್ಲಿ ವಿರಮಿಸುವ ಅವಕಾಶ ಮಾಡಿಕೊಡಿ.12) ಆಕೆಯ ಬಗ್ಗೆ ನೀವೆಷ್ಟು ಕಾಳಜಿ ವಹಿಸುತ್ತೀರ ಎಂಬ ಬಗ್ಗೆ ಆಕೆಗೆ ಮನವರಿಕೆ ಮಾಡಿಕೊಡಿ.13) ಆಕೆಗೆ ಚಿನ್ನದ ಆಭರಣ ಮತ್ತು ಬಟ್ಟೆಯ ಉಡುಗೊರೆ ಸಂದರ್ಭ ಬಂದಾಗಲೆಲ್ಲ ನೀಡುತ್ತಿರಿ.14) ನೀವು ಏಕಾಂಗಿಯಾಗಿರುವಾಗ ಯಾವ ರೀತಿ ವರ್ತಿಸುತ್ತೀರೋ, ನಿಮ್ಮ ಸ್ನೇಹಿತರಿರುವಾಗಲೂ ಅದೇ ರೀತಿ ವರ್ತಿಸಿ.15) ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮುಗುಳ್ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ.16) ವಾರಾಂತ್ಯದಲ್ಲಿ ತಪ್ಪದೆ ಹೊಟೇಲುಗಳಿಗೆ, ಪಾರ್ಕುಗಳಿಗೆ ಕರೆದೊಯ್ಯಿರಿ. ಇದರಿಂದ ಮುಂದಿನ ಇಡೀ ವಾರಕ್ಕೆ ಆಕೆಗೆ ಚೈತನ್ಯ ದೊರೆಯುತ್ತದೆ.17) ಮಳೆ ಬಂದಾಗ, ಚಳಿ ಇದ್ದಾಗ ಮುಸುಕು ಹೊದ್ದು ಮಲಗಬೇಡಿ. ಇಂಥ ಸಂದರ್ಭದಲ್ಲಿ ಸಾಮೀಪ್ಯ, ಸಾಂಗತ್ಯವೇ ಆಕೆಗೆ ಪುಳಕ ನೀಡುತ್ತದೆ.18) ಒಬ್ಬೊಬ್ಬರೇ ಹಾಡು ಕೇಳುತ್ತ ಮೈಮರೆಯಬೇಡಿ, ಆಕೆಗೂ ಕೇಳಿಸಿ.19) ಆಕೆಯ ಹುಟ್ಟುಹಬ್ಬವನ್ನು ಯಾವತ್ತೂ ನೆನಪಿಟ್ಟುಕೊಂಡಿರಿ ಮತ್ತು ಅಂದು ತಪ್ಪದೇ ಅನಿರೀಕ್ಷಿತ ಉಡುಗೊರೆ ನೀಡಿ ಮತ್ತು ಇಡೀ ದಿನ ಜೊತೆಯಾಗಿರಿ.20) ಆಕೆ ಗಿಫ್ಟ್ ನೀಡಿದಾಗ, ಇಷ್ಟವಾಗದಿದ್ದರೂ ತೋರ್ಪಡಿಸಿಕೊಳ್ಳಬೇಡಿ.21) ಆಕೆಯ ಆಸಕ್ತಿಕರ ವಿಷಯಗಳ ಬಗ್ಗೆ ನೀವೂ ಆಸಕ್ತಿ ಬೆಳೆಸಿಕೊಳ್ಳಿ.22) ನಿಮ್ಮಿಬ್ಬರ ನಡುವಿನ ಪ್ರತೀ ಸಣ್ಣ ವಿಷಯವನ್ನೂ ಜ್ಞಾಪಕದಲ್ಲಿಟ್ಟುಕೊಳ್ಳಿ.23) ಯಾವುದೇ ಕಾರಣಕ್ಕೂ ಆಕೆಯ ಗೆಳತಿಯರನ್ನು ಆಕೆಯೆದುರು ಹೊಗಳಬೇಡಿ.24) ಅಪ್ಪಿತಪ್ಪಿಯೂ ತವರು ಮನೆಯವರ ಬಗ್ಗೆ ಕೇವಲವಾಗಿ ಮಾತನಾಡಬೇಡಿ.