ಮೆಚ್ಚಿನ ಹುಡುಗಿಯ ಹೃದಯ ಕದಿಯುವುದು ಕೆಲ ಹುಡುಗರಿಗೆ ಕರತಲಾಮಲಕ. ಹುಡುಗರಲ್ಲಿನ ಇನ್ ಬಿಲ್ಟ್ ಆಕರ್ಷಣೆಯಿಂದಲೋ ಅಥವಾ ಹುಡುಗಿಯರಲ್ಲಿನ ಇನ್ ಬಿಲ್ಟ್ ಮೂರ್ಖತನದಿಂದಲೋ ಕಿಂಚಿತ್ ಪ್ರಯತ್ನವೂ ಇಲ್ಲದೆ ನಿರಾಯಾಸವಾಗಿ ಪ್ರೇಮದ ಬಲೆಯಲ್ಲಿ ಬಿದ್ದಿರುತ್ತಾರೆ. ಇನ್ನು ಕೆಲವರು 'ಕಾಂತೆ, ನಿನಗಾಗಿ ಪ್ರಾಣ ಬಿಡಲೂ ತಯಾರು' ಅಂದರೂ ಮಲ್ಲಿಗೆ ಎಸಳಿನ ಮನಸಿನ ಹುಡುಗಿ ಕ್ಯಾರೆ ಅಂದಿರುವುದಿಲ್ಲ. ಹಿಂದಿನ ಕಾಲದಲ್ಲಾಗಿದ್ದರೆ ನೆರಿಗೆ ಲಂಗದ ಹುಡುಗಿಯತ್ತ ಒಂದು ವಾರೆನೋಟ ಬೀರಿದ್ದರೂ ಸಾಕಿತ್ತು, ಹೊಸಹೊಸ ಭಾವ ತುಂಬಿ, ನಸುನಗೆ ಚಿಮ್ಮಿ ಮರುಳಾಗಿಬಿಡುತ್ತಿದ್ದರು. ಆದರೆ, ಕಾಲೇಜು ಮೆಟ್ಟಿಲೇರಿದಾಕ್ಷಣ ಟಿಶರ್ಟು ಮತ್ತು ಜೀನ್ಸ್ ಏರಿಸಿಕೊಂಡು ಎದೆಯುಬ್ಬಿಸಿಕೊಂಡು ನಡೆಯುವ ಹುಡುಗಿಯರ ಮೇಲೆ ಮನ್ಮಥ ಬಾಣ ಬಿಡುವುದು ಅಷ್ಟು ಸುಲಭವಾದ ಮಾತಲ್ಲ. ಆದರೆ, ಹುಡುಗರು ಮಾತ್ರ ನಿರಾಶರಾಗುವ ಕಾರಣವಿಲ್ಲ. ಕೆಳಗೆ ತಿಳಿಸಿರುವ ಕೆಲ ಅಂಶಗಳತ್ತ ಗಮನಹರಿಸಿದರೆ ಮನದನ್ನೆಯನ್ನು ಮರುಳು ಮಾಡುವಲ್ಲಿ ಹುಡುಗರು ಹಿಂದೆ ಬೀಳಲಾರರು. ಇವನ್ನೆಲ್ಲ ಮಾಡಿಯೂ ಹುಡುಗಿಯನ್ನು ಆಕರ್ಷಿಸುವಲ್ಲಿ ಸೋತರೆ ದೇವದಾಸ್ ಆಗುವ ಅಥವಾ ಬದುಕೇ ಮುಗಿಯಿತು ಎಂದುಕೊಳ್ಳುವ ಅಗತ್ಯವೂ ಇಲ್ಲ.1) ಕಣ್ಣಲ್ಲಿ ಕಣ್ಣು : ಅವಳ ಕಣ್ಣಲ್ಲಿ ನಿಮ್ಮ ಬಿಂಬ ಬಿದ್ದರೆ ಓಕೆ. ಆದರೆ, ಕಣ್ಣು ಕಣ್ಣು ಒಂದಾಗುವ ಕ್ಷಣದಲ್ಲಿ, ಆಕೆ ತನ್ನ ತಾಯಿಯ ಬಗ್ಗೆಯೇ ಮೈಮರೆತು ಹೇಳುವ ಹೊತ್ತಿನಲ್ಲಿ ನಿಮ್ಮ ದೃಷ್ಟಿ ಆಕೆ ವಕ್ಷಸ್ಥಳದಲ್ಲಿ ಬಿದ್ದಿದ್ದು ಆಕೆಗೇನಾದರೂ ಗೊತ್ತಾದರೆ, ಡೋಂಟ್ ಬಿ ಸಾರಿ.2) ಸ್ಮಾರ್ಟ್ ಆಗಿ ಕಾಣಿರಿ : ಸ್ಮಾರ್ಟ್ ಆಗಿ ಕಾಣಬೇಕೆಂದರೆ ನೀಟಾಗಿ ಶೇವ್ ಮಾಡಿರಬೇಕು, ನೀಟಾಗಿ ಬಾಚಿರಬೇಕು, ನೀಟಾಗಿ ಮೀಸೆ ಕತ್ತರಿಸಿರಬೇಕು ಎಂದೇನಾದರೂ ನೀವು ಎಣಿಸಿದ್ದರೆ, ನಿಮ್ಮ ಎಣಿಕೆ ತಪ್ಪು. ಕುರುಚಲು ಗಡ್ಡ ಬಿಟ್ಟ, ಬೆವರಿನ ವಾಸನೆ ಬರದಂತೆ ಶಿಸ್ತಾಗಿ ಡ್ರೆಸ್ ಮಾಡಿಕೊಂಡಿರುವ ಹುಡುಗರನ್ನು ಹುಡುಗಿಯರು ಮೆಚ್ಚುತ್ತಾರೆ.3) ಉತ್ತಮ ಗೆಳೆಯರ ಬಳಗ : ನೀವೆಷ್ಟು ಡಿಸೆಂಟಾಗಿರ್ತೀರೋ ನಿಮ್ಮ ಸುತ್ತಲಿನ ಗೆಳೆಯರ ಬಳಗವೂ ಅಷ್ಟೇ ಒಳ್ಳೆಯ ನಡತೆಯವರಾಗಿರಬೇಕು ಅಂತ ಹುಡುಗಿಯರು ಬಯಸುತ್ತಾರೆ ಎಂಬುದು ನೆನಪಿರಲಿ. ಆದರೆ, ಆ ಗೆಳೆಯರ ಬಳಗದಲ್ಲಿ ಬೇರೆಯವನ ಪ್ರೇಮದ ಬಲೆಗೆ ಬೀಳದಂತೆ ಎಚ್ಚರವಹಿಸಿ ಅಷ್ಟೆ.4) ಮೊಬೈಲಲ್ಲಿ ಇಣುಕಬೇಡಿ : ಹುಡುಗಿಯ ಫೋನಿಗೆ ಎಸ್ಎಮ್ಎಸ್ ಬಂದಾಗಲಾಗಲಿ, ಕರೆ ಬಂದಾಗಲಾಗಲಿ ಇಣುಕಿ ನೋಡುವ ದುರಭ್ಯಾಸ ಬೆಳೆಸಿಕೊಳ್ಳಬೇಡಿ. ಹಾಗೆಯೆ, ನಿಮಗೆ ಕರೆ ಬಂದಾಗಲೂ ಆಫ್ ಮಾಡಿರಿ ಅಥವಾ ನಂತರ ಮಾಡುತ್ತೇನೆಂದು ಕಟ್ ಮಾಡಿರಿ. ನಿಮ್ಮ ಗಮನವೇನಿದ್ದರೂ ಆಕೆಯ ಮೇಲಿರಬೇಕು.5) ಎಡವಟ್ಟು ಪ್ರಶ್ನೆ ಕೇಳಬೇಡಿ : ಆಕೆ ತನ್ನ ಮನೆಯವರ ಬಗ್ಗೆ ಅಥವಾ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳುತ್ತಿರುವಾಗ ಪೂರಕ ಪ್ರಶ್ನೆ ಕೇಳಿ. ಎಡವಟ್ಟು ಪ್ರಶ್ನೆಗಳನ್ನು ಕೇಳಿ ಇರುಸುಮುರುಸು ಮಾಡಿ ದಕ್ಕಿರುವ ಸುವರ್ಣ ಅವಕಾಶವನ್ನು ಹಾಳುಮಾಡಿಕೊಳ್ಳಬೇಡಿ. ಅವಳ ಬಗ್ಗೆ ಆಸಕ್ತಿಯಿದೆ ಎಂದು ತೋರಿಸಿಕೊಳ್ಳಿ.6) ಹೊಗಳಿರಿ, ಅಟ್ಟಕ್ಕೇರಿಸಬೇಡಿ : ಹೊಗಳುವುದನ್ನು ಹುಡುಗಿಯರು ಇಷ್ಟಪಡುತ್ತಾರೆಂಬುದು ಎಲ್ಲರಿಗೂ ತಿಳಿದ ಸತ್ಯ. ಆಕೆ ಧರಿಸಿರುವ ಡ್ರೆಸ್, ಆಕೆಯಲ್ಲಿರುವ ಉತ್ತಮ ಗುಣ, ಅಂದ ಚೆಂದವನ್ನು ಮಂದವಾಗಿಯೇ ಹೊಗಳಿರಿ. ಆದರೆ, ಸಿಕ್ಕಾಪಟ್ಟೆ ಹೊಗಳಿ ಅಟ್ಟಕ್ಕೇರಿಸಬೇಡಿ. ಅತಿಯಾದ ಹೊಗಳಿಕೆ ಕೆಲವರು ಇಷ್ಟಪಡಲಿಕ್ಕಿಲ್ಲ.7) ಸಲಹೆ ಕೇಳಿ : ನಮ್ಮನ್ನು ನಾವು ಬೃಹಸ್ಪತಿಗಳೆಂದು ಅಂದುಕೊಂಡಿದ್ದರೂ ಅದನ್ನು ಆಕೆಯ ಎದುರಿಗೆ ಪ್ರದರ್ಶಿಸುವುದು ಜಾಣತನವಲ್ಲ. ಗೊತ್ತಿಲ್ಲದಂತೆ ನಟಿಸುವುದು, ಆಕೆಯ ಸಲಹೆ ಕೇಳುವುದು ಕೂಡ ಜಾಣತನದ ಲಕ್ಷಣ