Sunday, June 12, 2011


How to impress your love?ನಿಮ್ಮ ಮನದನ್ನೆ(ಹೆಂಡತಿ ಅಂತ ಓದಿಕೊಳ್ಳಿ)ಯನ್ನು ಮೆಚ್ಚಿಸುವುದು ಹೇಗೆ? ಇದು ಯಾವುದೇ ಗಂಡಸಿಗಾಗಲಿ ಮಿಲಿಯನ್ ಡಾಲರ್ ಪ್ರಶ್ನೆ. ಆದರೂ, ಜೀವನರಥ ಸುಗಮವಾಗಿ ಸಾಗುತಿರಬೇಕಾದರೆ ಪ್ರಯತ್ನ ಸತತವಾಗಿ ಸಾಗುತ್ತಿರಲೇಬೇಕು. ಸುಖ ಸಂಸಾರಕ್ಕೆ 12 ಸೂತ್ರಗಳು ಸಾಕಾಗಲಿಕ್ಕಿಲ್ಲವೆಂದು ಮತ್ತು ನಿಮ್ಮ ಸಂಸಾರದಲ್ಲಿಯೂ ಸರಿಗಮವಿರಲೆಂದು ಎರಡು ಡಜನ್ ಸೂತ್ರಗಳನ್ನು ಇಲ್ಲಿ ನೀಡಲಾಗಿದೆ. ಇವುಗಳಲ್ಲಿ ಕೆಲವು ನಿಮಗೆ ಕ್ರೇಜಿ ಅನ್ನಿಸಬಹುದು, ಹಲವು ಸೂತ್ರಗಳನ್ನು ನೀವೀಗಾಗಲೆ ಬಳಸಿ ಸೋತಿರಬಹುದು ಅಥವಾ ಗೆದ್ದಿರಬಹುದು. ಕೆಲವು ವರ್ಕ್ ಔಟ್ ಆಗೋದೆ ಇಲ್ಲ ಅನ್ನುವಂಥವೂ ಸಖತ್ ಕೆಲಸ ಮಾಡಬಹುದು. ಹೆಣ್ಣಿನ ಮನಸ್ಸನ್ನು ಬಲ್ಲವರಾರು?

1) ನೀನು ಸುಂದರಿ ಎಂದು ಆಕೆಗೆ ಆಗಾಗ ಹೇಳುತ್ತಿರಿ.2) ದಿನದಲ್ಲಿ ಒಂದು ಕ್ಷಣಕ್ಕಾದರೂ ಆಕೆಯ ಕೈಗಳನ್ನು ಹಿಡಿದುಕೊಳ್ಳಿ.3) ಮುನಿಸಿಕೊಂಡಾಗ ಆಕೆಯನ್ನು ಹಿಂಭಾಗದಿಂದ ಅಪ್ಪಿಕೊಂಡು, ಮುದ್ದಿನಿಂದ ಚುಂಬಿಸಿ.4) ಆಕೆಯ ಧ್ವನಿ ಸಂದೇಶಗಳನ್ನು ಅಲಾರ್‍ಮ್ ಆಗಿ ಇಟ್ಟುಕೊಳ್ಳಿ.5) ಆಕೆ ನಿಮ್ಮೊಂದಿಗಿಲ್ಲದಾಗ ಹೊರಗೆ ಹ್ಯಾಂಗ್ ಔಟ್ ಆಗಲು ಹೋಗಬೇಡಿ. ಆಕೆ ಹರ್ಟ್ ಆಗಬಹುದು.6) ಬರೀ ಹಾಯ್ ಅನ್ನಲೂ ಆಕೆಗೆ ಕರೆ ಮಾಡಿ.7) ನಿಮ್ಮ ಸ್ನೇಹಿತರಿಗೆ ಈಕೆ ನಿಮ್ಮ ಗರ್ಲ್ ಫ್ರೆಂಡ್ ಎಂದು ಪರಿಚಯಿಸಿ.8) ವಿಶ್ರಾಂತಿ ತೆಗೆದುಕೊಳ್ಳುವಾಗ ಆಕೆಯ ತಲೆ ಕೂದಲಿನೊಂದಿಗೆ ಆಟವಾಡಿ.9) ಆಕೆಯನ್ನು ಕಚೇರಿಗೆ ಬಿಡುವುದು, ಕರೆದುಕೊಂಡು ಬರುವುದನ್ನು ರೂಢಿಸಿಕೊಳ್ಳಿ.10) ಸಮಯ ಸಿಕ್ಕಾಗಲೆಲ್ಲ ಜೋಕುಗಳನ್ನು ಸಿಡಿಸಿ ನಗುವಂತೆ ಮಾಡಿ.11) ಆಕೆಗೆ ನಿಮ್ಮ ತೋಳುಗಳಲ್ಲಿ ವಿರಮಿಸುವ ಅವಕಾಶ ಮಾಡಿಕೊಡಿ.12) ಆಕೆಯ ಬಗ್ಗೆ ನೀವೆಷ್ಟು ಕಾಳಜಿ ವಹಿಸುತ್ತೀರ ಎಂಬ ಬಗ್ಗೆ ಆಕೆಗೆ ಮನವರಿಕೆ ಮಾಡಿಕೊಡಿ.13) ಆಕೆಗೆ ಚಿನ್ನದ ಆಭರಣ ಮತ್ತು ಬಟ್ಟೆಯ ಉಡುಗೊರೆ ಸಂದರ್ಭ ಬಂದಾಗಲೆಲ್ಲ ನೀಡುತ್ತಿರಿ.14) ನೀವು ಏಕಾಂಗಿಯಾಗಿರುವಾಗ ಯಾವ ರೀತಿ ವರ್ತಿಸುತ್ತೀರೋ, ನಿಮ್ಮ ಸ್ನೇಹಿತರಿರುವಾಗಲೂ ಅದೇ ರೀತಿ ವರ್ತಿಸಿ.15) ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮುಗುಳ್ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ.16) ವಾರಾಂತ್ಯದಲ್ಲಿ ತಪ್ಪದೆ ಹೊಟೇಲುಗಳಿಗೆ, ಪಾರ್ಕುಗಳಿಗೆ ಕರೆದೊಯ್ಯಿರಿ. ಇದರಿಂದ ಮುಂದಿನ ಇಡೀ ವಾರಕ್ಕೆ ಆಕೆಗೆ ಚೈತನ್ಯ ದೊರೆಯುತ್ತದೆ.17) ಮಳೆ ಬಂದಾಗ, ಚಳಿ ಇದ್ದಾಗ ಮುಸುಕು ಹೊದ್ದು ಮಲಗಬೇಡಿ. ಇಂಥ ಸಂದರ್ಭದಲ್ಲಿ ಸಾಮೀಪ್ಯ, ಸಾಂಗತ್ಯವೇ ಆಕೆಗೆ ಪುಳಕ ನೀಡುತ್ತದೆ.18) ಒಬ್ಬೊಬ್ಬರೇ ಹಾಡು ಕೇಳುತ್ತ ಮೈಮರೆಯಬೇಡಿ, ಆಕೆಗೂ ಕೇಳಿಸಿ.19) ಆಕೆಯ ಹುಟ್ಟುಹಬ್ಬವನ್ನು ಯಾವತ್ತೂ ನೆನಪಿಟ್ಟುಕೊಂಡಿರಿ ಮತ್ತು ಅಂದು ತಪ್ಪದೇ ಅನಿರೀಕ್ಷಿತ ಉಡುಗೊರೆ ನೀಡಿ ಮತ್ತು ಇಡೀ ದಿನ ಜೊತೆಯಾಗಿರಿ.20) ಆಕೆ ಗಿಫ್ಟ್ ನೀಡಿದಾಗ, ಇಷ್ಟವಾಗದಿದ್ದರೂ ತೋರ್ಪಡಿಸಿಕೊಳ್ಳಬೇಡಿ.21) ಆಕೆಯ ಆಸಕ್ತಿಕರ ವಿಷಯಗಳ ಬಗ್ಗೆ ನೀವೂ ಆಸಕ್ತಿ ಬೆಳೆಸಿಕೊಳ್ಳಿ.22) ನಿಮ್ಮಿಬ್ಬರ ನಡುವಿನ ಪ್ರತೀ ಸಣ್ಣ ವಿಷಯವನ್ನೂ ಜ್ಞಾಪಕದಲ್ಲಿಟ್ಟುಕೊಳ್ಳಿ.23) ಯಾವುದೇ ಕಾರಣಕ್ಕೂ ಆಕೆಯ ಗೆಳತಿಯರನ್ನು ಆಕೆಯೆದುರು ಹೊಗಳಬೇಡಿ.24) ಅಪ್ಪಿತಪ್ಪಿಯೂ ತವರು ಮನೆಯವರ ಬಗ್ಗೆ ಕೇವಲವಾಗಿ ಮಾತನಾಡಬೇಡಿ.
How to win a girl's heartಮೆಚ್ಚಿನ ಹುಡುಗಿಯ ಹೃದಯ ಕದಿಯುವುದು ಕೆಲ ಹುಡುಗರಿಗೆ ಕರತಲಾಮಲಕ. ಹುಡುಗರಲ್ಲಿನ ಇನ್ ಬಿಲ್ಟ್ ಆಕರ್ಷಣೆಯಿಂದಲೋ ಅಥವಾ ಹುಡುಗಿಯರಲ್ಲಿನ ಇನ್ ಬಿಲ್ಟ್ ಮೂರ್ಖತನದಿಂದಲೋ ಕಿಂಚಿತ್ ಪ್ರಯತ್ನವೂ ಇಲ್ಲದೆ ನಿರಾಯಾಸವಾಗಿ ಪ್ರೇಮದ ಬಲೆಯಲ್ಲಿ ಬಿದ್ದಿರುತ್ತಾರೆ. ಇನ್ನು ಕೆಲವರು 'ಕಾಂತೆ, ನಿನಗಾಗಿ ಪ್ರಾಣ ಬಿಡಲೂ ತಯಾರು' ಅಂದರೂ ಮಲ್ಲಿಗೆ ಎಸಳಿನ ಮನಸಿನ ಹುಡುಗಿ ಕ್ಯಾರೆ ಅಂದಿರುವುದಿಲ್ಲ. ಹಿಂದಿನ ಕಾಲದಲ್ಲಾಗಿದ್ದರೆ ನೆರಿಗೆ ಲಂಗದ ಹುಡುಗಿಯತ್ತ ಒಂದು ವಾರೆನೋಟ ಬೀರಿದ್ದರೂ ಸಾಕಿತ್ತು, ಹೊಸಹೊಸ ಭಾವ ತುಂಬಿ, ನಸುನಗೆ ಚಿಮ್ಮಿ ಮರುಳಾಗಿಬಿಡುತ್ತಿದ್ದರು. ಆದರೆ, ಕಾಲೇಜು ಮೆಟ್ಟಿಲೇರಿದಾಕ್ಷಣ ಟಿಶರ್ಟು ಮತ್ತು ಜೀನ್ಸ್ ಏರಿಸಿಕೊಂಡು ಎದೆಯುಬ್ಬಿಸಿಕೊಂಡು ನಡೆಯುವ ಹುಡುಗಿಯರ ಮೇಲೆ ಮನ್ಮಥ ಬಾಣ ಬಿಡುವುದು ಅಷ್ಟು ಸುಲಭವಾದ ಮಾತಲ್ಲ. ಆದರೆ, ಹುಡುಗರು ಮಾತ್ರ ನಿರಾಶರಾಗುವ ಕಾರಣವಿಲ್ಲ. ಕೆಳಗೆ ತಿಳಿಸಿರುವ ಕೆಲ ಅಂಶಗಳತ್ತ ಗಮನಹರಿಸಿದರೆ ಮನದನ್ನೆಯನ್ನು ಮರುಳು ಮಾಡುವಲ್ಲಿ ಹುಡುಗರು ಹಿಂದೆ ಬೀಳಲಾರರು. ಇವನ್ನೆಲ್ಲ ಮಾಡಿಯೂ ಹುಡುಗಿಯನ್ನು ಆಕರ್ಷಿಸುವಲ್ಲಿ ಸೋತರೆ ದೇವದಾಸ್ ಆಗುವ ಅಥವಾ ಬದುಕೇ ಮುಗಿಯಿತು ಎಂದುಕೊಳ್ಳುವ ಅಗತ್ಯವೂ ಇಲ್ಲ.1) ಕಣ್ಣಲ್ಲಿ ಕಣ್ಣು : ಅವಳ ಕಣ್ಣಲ್ಲಿ ನಿಮ್ಮ ಬಿಂಬ ಬಿದ್ದರೆ ಓಕೆ. ಆದರೆ, ಕಣ್ಣು ಕಣ್ಣು ಒಂದಾಗುವ ಕ್ಷಣದಲ್ಲಿ, ಆಕೆ ತನ್ನ ತಾಯಿಯ ಬಗ್ಗೆಯೇ ಮೈಮರೆತು ಹೇಳುವ ಹೊತ್ತಿನಲ್ಲಿ ನಿಮ್ಮ ದೃಷ್ಟಿ ಆಕೆ ವಕ್ಷಸ್ಥಳದಲ್ಲಿ ಬಿದ್ದಿದ್ದು ಆಕೆಗೇನಾದರೂ ಗೊತ್ತಾದರೆ, ಡೋಂಟ್ ಬಿ ಸಾರಿ.2) ಸ್ಮಾರ್ಟ್ ಆಗಿ ಕಾಣಿರಿ : ಸ್ಮಾರ್ಟ್ ಆಗಿ ಕಾಣಬೇಕೆಂದರೆ ನೀಟಾಗಿ ಶೇವ್ ಮಾಡಿರಬೇಕು, ನೀಟಾಗಿ ಬಾಚಿರಬೇಕು, ನೀಟಾಗಿ ಮೀಸೆ ಕತ್ತರಿಸಿರಬೇಕು ಎಂದೇನಾದರೂ ನೀವು ಎಣಿಸಿದ್ದರೆ, ನಿಮ್ಮ ಎಣಿಕೆ ತಪ್ಪು. ಕುರುಚಲು ಗಡ್ಡ ಬಿಟ್ಟ, ಬೆವರಿನ ವಾಸನೆ ಬರದಂತೆ ಶಿಸ್ತಾಗಿ ಡ್ರೆಸ್ ಮಾಡಿಕೊಂಡಿರುವ ಹುಡುಗರನ್ನು ಹುಡುಗಿಯರು ಮೆಚ್ಚುತ್ತಾರೆ.3) ಉತ್ತಮ ಗೆಳೆಯರ ಬಳಗ : ನೀವೆಷ್ಟು ಡಿಸೆಂಟಾಗಿರ್ತೀರೋ ನಿಮ್ಮ ಸುತ್ತಲಿನ ಗೆಳೆಯರ ಬಳಗವೂ ಅಷ್ಟೇ ಒಳ್ಳೆಯ ನಡತೆಯವರಾಗಿರಬೇಕು ಅಂತ ಹುಡುಗಿಯರು ಬಯಸುತ್ತಾರೆ ಎಂಬುದು ನೆನಪಿರಲಿ. ಆದರೆ, ಆ ಗೆಳೆಯರ ಬಳಗದಲ್ಲಿ ಬೇರೆಯವನ ಪ್ರೇಮದ ಬಲೆಗೆ ಬೀಳದಂತೆ ಎಚ್ಚರವಹಿಸಿ ಅಷ್ಟೆ.4) ಮೊಬೈಲಲ್ಲಿ ಇಣುಕಬೇಡಿ : ಹುಡುಗಿಯ ಫೋನಿಗೆ ಎಸ್ಎಮ್ಎಸ್ ಬಂದಾಗಲಾಗಲಿ, ಕರೆ ಬಂದಾಗಲಾಗಲಿ ಇಣುಕಿ ನೋಡುವ ದುರಭ್ಯಾಸ ಬೆಳೆಸಿಕೊಳ್ಳಬೇಡಿ. ಹಾಗೆಯೆ, ನಿಮಗೆ ಕರೆ ಬಂದಾಗಲೂ ಆಫ್ ಮಾಡಿರಿ ಅಥವಾ ನಂತರ ಮಾಡುತ್ತೇನೆಂದು ಕಟ್ ಮಾಡಿರಿ. ನಿಮ್ಮ ಗಮನವೇನಿದ್ದರೂ ಆಕೆಯ ಮೇಲಿರಬೇಕು.5) ಎಡವಟ್ಟು ಪ್ರಶ್ನೆ ಕೇಳಬೇಡಿ : ಆಕೆ ತನ್ನ ಮನೆಯವರ ಬಗ್ಗೆ ಅಥವಾ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳುತ್ತಿರುವಾಗ ಪೂರಕ ಪ್ರಶ್ನೆ ಕೇಳಿ. ಎಡವಟ್ಟು ಪ್ರಶ್ನೆಗಳನ್ನು ಕೇಳಿ ಇರುಸುಮುರುಸು ಮಾಡಿ ದಕ್ಕಿರುವ ಸುವರ್ಣ ಅವಕಾಶವನ್ನು ಹಾಳುಮಾಡಿಕೊಳ್ಳಬೇಡಿ. ಅವಳ ಬಗ್ಗೆ ಆಸಕ್ತಿಯಿದೆ ಎಂದು ತೋರಿಸಿಕೊಳ್ಳಿ.6) ಹೊಗಳಿರಿ, ಅಟ್ಟಕ್ಕೇರಿಸಬೇಡಿ : ಹೊಗಳುವುದನ್ನು ಹುಡುಗಿಯರು ಇಷ್ಟಪಡುತ್ತಾರೆಂಬುದು ಎಲ್ಲರಿಗೂ ತಿಳಿದ ಸತ್ಯ. ಆಕೆ ಧರಿಸಿರುವ ಡ್ರೆಸ್, ಆಕೆಯಲ್ಲಿರುವ ಉತ್ತಮ ಗುಣ, ಅಂದ ಚೆಂದವನ್ನು ಮಂದವಾಗಿಯೇ ಹೊಗಳಿರಿ. ಆದರೆ, ಸಿಕ್ಕಾಪಟ್ಟೆ ಹೊಗಳಿ ಅಟ್ಟಕ್ಕೇರಿಸಬೇಡಿ. ಅತಿಯಾದ ಹೊಗಳಿಕೆ ಕೆಲವರು ಇಷ್ಟಪಡಲಿಕ್ಕಿಲ್ಲ.7) ಸಲಹೆ ಕೇಳಿ : ನಮ್ಮನ್ನು ನಾವು ಬೃಹಸ್ಪತಿಗಳೆಂದು ಅಂದುಕೊಂಡಿದ್ದರೂ ಅದನ್ನು ಆಕೆಯ ಎದುರಿಗೆ ಪ್ರದರ್ಶಿಸುವುದು ಜಾಣತನವಲ್ಲ. ಗೊತ್ತಿಲ್ಲದಂತೆ ನಟಿಸುವುದು, ಆಕೆಯ ಸಲಹೆ ಕೇಳುವುದು ಕೂಡ ಜಾಣತನದ ಲಕ್ಷಣ

ನೂರೆಂಟು ಕಾಮನೆಗಳನ್ನು ಕೆರಳಿಸುವ ಬಣ್ಣ

Colors in romanceಪ್ರೀತಿ ಕುರುಡು ಅಂತಾರೆ ಹೌದಾ? ನಿಜ, ಪ್ರೀತಿ ಜಾತಿ, ಭಾಷೆ, ಗಡಿ, ಬಣ್ಣ ಎಲ್ಲವನ್ನೂ ಮೀರಿದ್ದು. ಪ್ರೀತಿಯೆಂಬ ಹೊಂಡದಲ್ಲಿ ಬಿದ್ದವರ ಮನದಲ್ಲಿ ಇದಾವುದೂ ಇರುವುದಿಲ್ಲ. ಎಲ್ಲ ಮಿತಿಗಳನ್ನು ಮೀರಿ ದಡ ಸೇರುವುದೊಂದೇ ಅವರ ಧ್ಯೇಯವಾಗಿರುತ್ತದೆ. ಆದರೆ, ಪ್ರೀತಿಯ ಮೋಹಕ್ಕೆ ಒಳಗಾಗುವ ಮುನ್ನ ಬಣ್ಣ ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸಿರುತ್ತದೆ."ನನ್ನ ಹುಡುಗಿ ತೊಟ್ಟ ಕೆಂಬಣ್ಣದ ಸೆಲ್ವಾರ್ ಕಮೀಜಿನ ಆಕರ್ಷಣೆಗೆ ಒಳಗಾಗಿಯೇ ಆಕೆಯನ್ನು ಪ್ರೀತಿಸಲು ಪ್ರಾರಂಭಿಸಿದೆ. ಎಷ್ಟು ಚೆನ್ನಾಗಿ ಕಾಣ್ತಾಳೆ ಗೊತ್ತಾ ಆ ಬಣ್ಣದ ಉಡುಪು ತೊಟ್ಟಾಗ" ಅಂತ ಹುಡುಗ ತನ್ನ ಪ್ರೀತಿಯ ಬಗ್ಗೆ ಕೊಚ್ಚಿಕೊಂಡಾಗ ಪಕ್ಕದಲ್ಲಿದ್ದವರಿಗೆ ಅಸೂಯೆಯಾಗದೆ ಇರದು. ಇತರ ಕಣ್ಣುಗಳೂ ಅಂತಹ ಬಣ್ಣದ ಹುಡುಕಾಟದಲ್ಲಿ ತೊಡಗಲು ಪ್ರಾರಂಭಿಸಿರುತ್ತವೆ.ಬಂಧನ ಚಿತ್ರದ ಬಣ್ಣ ನನ್ನ ಒಲವಿನ ಬಣ್ಣ... ಹಾಡು ಬಣ್ಣದ ವರ್ಣನೆಯಿಂದಲೇ ಅನೇಕ ಪ್ರೇಮಿಗಳಲ್ಲಿ ಪ್ರೀತಿಯ ಬಣ್ಣ ಹಚ್ಚಿದ್ದು ಸುಳ್ಳಲ್ಲ. ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು ಎಂದು ಪ್ರಿಯತಮೆಯ ಮುಂದು ಉಲಿದು ನೋಡಿ, ಆಕೆ ಪ್ರೇಮದ ಬಲೆಗೆ ಬೀಳದಿದ್ದರೆ ಕೇಳಿ. ಪ್ರೇಮದ ಬಲೆಗೆ ಬಿದ್ದು, ಮದುವೆಯಾಗಿ, ಮಧುಚಂದ್ರ ಮುಗಿದು, ಪ್ರತಿಬಾರಿ ಶಯನಗೃಹಕ್ಕೆ ಕಾಲಿಟ್ಟಾಗ ಆಕರ್ಷಣೆಗೆ ಒಳಗಾಗುವುದು ಈ ಬಣ್ಣವೆ. ಗೋಡೆ ಬಣ್ಣ, ಕಿಟಕಿ ಸ್ಕ್ರೀನ್ ಬಣ್ಣ, ಹಾಸಿಗೆಯ ಹೊದಿಕೆಯ ಬಣ್ಣ... ಕೊನೆಗೆ ಮಲಗಲು ಸಜ್ಜಾಗಿ ನಿಂತ ಬಾಳ ಸಂಗಾತಿ ತೊಟ್ಟ ಉಡುಪಿನ ಬಣ್ಣ...ಆ ಒಂದೊಂದು ಬಣ್ಣದಲ್ಲಿಯೂ ಒಂದೊಂದು ಬಗೆಯ ಆಕರ್ಷಣೆಯಿರುತ್ತದೆ, ವಿಭಿನ್ನ ಭಾವನೆಗಳನ್ನು ಕೆರಳಿಸುತ್ತವೆ, ಪ್ರೇಮದ ನರಳಾಟಕ್ಕೆ ಇಂಬು ನೀಡುತ್ತವೆ. ಮೊದಲನೆ ನೋಟಕೆ ನಿನ್ನ ಮೇಲೆ ನನಗೆ ಮನಸಾಯ್ತು, ಮನಸಾಗಿ ಲವ್ವಾಯ್ತು... ಅಂತ ಲಘುವಾಗಿ ಹಿನ್ನೆಲೆಯಲ್ಲಿ ಹಾಡು ಕೇಳಿಬರುತ್ತಿದ್ದರೆ ದೇಹ ತೂಗುಯ್ಯಾಲೆಯಂತಾಗಿರುತ್ತದೆ, ಮನವು ಕೆರಳಿರುತ್ತದೆ. ಯಾವ ಬಣ್ಣ ಎಂಥ ಭಾವನೆ ಕೆರಳುತ್ತದೆ ಎಂಬುದನ್ನು ನೋಡೋಣ, ಬನ್ನಿ.1. ಕೆಂಪು : ಕೆಂಪು ಪ್ರೇಮದ ಸಂಕೇತ. ಪ್ರಥಮ ಆಕರ್ಷಣೆಯ ಬೀಜ ಬಿತ್ತುವುದೇ ಕೆಂಪು. ಗುಂಪು ಎಷ್ಟೇ ದಟ್ಟವಾಗಿದ್ದರೂ ಎದ್ದು ಕಾಣುವುದು ಕೆಂಬಣ್ಣವೆ. ಕೆಂಪು ವಿಶೇಷವಾದ ಭಾವನೆಯನ್ನು ಚಿಮ್ಮಿಸುತ್ತದೆ. ನೋಡಿದ ಕೂಡಲೇ ಮರುಳಾಗುವಂದೆ ಮಾಡುತ್ತದೆ. ಕೆಂಪು ನೈಟಿ, ಕೆಂಪು ಒಳ ಉಡುಪುಗಳು... ಇನಿಯನನ್ನು ಸನಿಹಕೆ ಸೆಳೆಯಲು ಇನ್ನೇನು ಬೇಕು?2. ಗುಲಾಬಿ : ಈ ಬಣ್ಣ ಪ್ರೇಮೋನ್ಮಾದದ ಸಂಕೇತ. ಪ್ರೀತಿ ಪ್ರೇಮದ ವಿಷಯಕ್ಕೆ ಬಂದರೆ ಗುಲಾಬಿಗೆ ಗುಲಾಬಿಯೇ ಸಾಟಿ. ಪ್ರೇಮಿಗಳ ದಿನದಂದು ಗುಲಾಬಿ ಇಡೀ ಜಗತ್ತನ್ನೇ ಆವರಿಸಿಕೊಂಡಿರುತ್ತದೆ. ಕೆಂಪು ಹೆಚ್ಚು ಆಕರ್ಷಿಸಿದರೆ, ಗುಲಾಬಿ ಹಿತವಾಗಿ ನಶೆಯೇರಿಸಿ ಬಿಲ್ಲನ್ನು ಹದೆಯೇರಿಸಿ ಝೇಂಕಾರ ಮಾಡಿಬಿಡುತ್ತದೆ. ಗುಲಾಬಿ ಬಣ್ಣ ತೊಟ್ಟ ಪ್ರಿಯತಮೆಯ ಚೆಲುವು ಎಂದಿಗಿಂತಲೂ ಹೆಚ್ಚಾಗಿರುತ್ತದೆ.3. ನೇರಳೆ : ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೆ... ಈ ಬಣ್ಣವನ್ನು ಬಣ್ಣಿಸಲಿಕ್ಕಾಗಿಯೇ ಹುಟ್ಟಿದಂತಹ ಹಾಡಿರಬಹುದು. ಹೌದು, ನೇರಳೆ ಬಣ್ಣ ವಿಭಿನ್ನ ಭಾವನೆಗಳನ್ನು ಪುಟಿದೇಳಿಸುತ್ತದೆ, ವಿಚಿತ್ರ ಕಾಮನೆಗಳನ್ನು ಕೆರಳಿಸುತ್ತದೆ. ಹೇಳಲೂ ಆಗಲು, ತಾಳಲೂ ಆಗಲು ಅನ್ನುವಂತ ಮನಸ್ಥಿತಿ. ಈ ಬಣ್ಣದ ಉಡುಪು ತೊಟ್ಟಾಗ ತುಂಟತನ ತಾನೇ ತಾನಾಗಿರುತ್ತದೆ ಮತ್ತು ಅದ್ಭುತ ಪ್ರೇಮದಾಟಕ್ಕೆ ಮೂಡನ್ನು ತಾನಾಗಿಯೇ ಸೃಷ್ಟಿಸುತ್ತದೆ.4. ಬೆಳ್ಳಿ : ಬೆಳ್ಳಿಯ ಹೊಳಪನ್ನು ಮೀರಿಸುವ ಇನ್ನೊಂದು ಬಣ್ಣವೇ ಇಲ್ಲ. ಚುಂಬಕದಂತೆ ಸೆಳೆಯುವ ಶಕ್ತಿ ಬೆಳ್ಳಿ ಬಣ್ಣದಲ್ಲಡಗಿದೆ. ಈ ಬಣ್ಣದ ಸೀರೆಯನ್ನೋ, ನೈಟಿಯನ್ನೋ ತೊಟ್ಟಾಗ ಗುಂಡು ತನಗೆ ಅರಿವಿಲ್ಲದಂತೆಯೇ ಸೆಳೆತಕ್ಕೆ ಒಳಗಾಗಿಬಿಡುತ್ತಾನೆ. ಕ್ಷಣಕಾಲ ತಾನೇನು ಮಾಡುತ್ತಿದ್ದೇನೆ ಎಂಬ ಅರಿವನ್ನೂ ಮರೆಸಿ ಮಂಚಕ್ಕೆ ಸೆಳೆಯುವ ಶಕ್ತಿ ಈ ಬಣ್ಣಕ್ಕಿದೆ.5. ಕಪ್ಪು : ಪ್ರಿಯಕರನಲ್ಲಿ ಪ್ರೇಮದ ಹುಚ್ಚು ಉನ್ಮಾದ ಉಕ್ಕಿಸಬೇಕಿದ್ದರೆ ಕಪ್ಪು ಬಣ್ಣಕ್ಕಿಂತ ಇನ್ನೊಂದು ಬಣ್ಣವೇ ಇಲ್ಲ. ಹೊಂಬಣ್ಣದ ಮೈಸಿರಿಯಿರುವ ಮಹಿಳೆ ಆಕರ್ಷಕವಾಗಿ ಮೈಗೊಪ್ಪುವ ಕಪ್ಪು ಬಣ್ಣದ ಒಳಉಡುಪಾಗಲಿ, ಮೇಲುಡುಪಾಗಲಿ ತೊಟ್ಟರೆ ಅವರಿಲ್ಲಯೇ ಒಂದು ಬಗೆಯ ಪರಿಪೂರ್ಣತೆ ತಂದುಕೊಡುತ್ತದೆ. ಆಮೇಲೆ ಮುಂದಿನ ಕೆಲಸವೆಲ್ಲ ಸರಾಗ.

ಧೂಮಲೀಲೆ ತಡೆಗೆ ಮನೆಮದ್ದು

Ayurveda home medicine helps quit smoking.
ಸಿಗರೇಟು ಬೀಡಿ ಸೇದುವುದನ್ನು ಬಿಡಿ ಎಂದು ಚಟ ಅಂಟಿಸಿಕೊಂಡವರಿಗೆ ತಿಳಿಯಹೇಳುವುದು ಕಷ್ಟಸಾಧ್ಯ. ಬುದ್ದಿ ಹೇಳಿದರೆ ಕೆಲವೊಮ್ಮೆ ಮಹಾಪರಾಧವೇ ಆಗುತ್ತದೆ!ಯಾಕೆಂದರೆ, ತಂಬಾಕು ಬುದ್ದಿ ಹೇಳುವವರಿಗಿಂತ ಹೆಚ್ಚು ಬುದ್ದಿವಂತ. ಧೂಮಪಾನದ ಚಟ ದೆವ್ವ ಹಿಡಿದಹಾಗೆ. ಮಾವು ಬೇವು ನಿಂಬೆ ಸೊಪ್ಪಿಗೆ ಅದು ಬೆದರುವುದಿಲ್ಲ. ತಾನೇ ತಾನಾಗಿ ಕಾಲಿಗೆ ಬುದ್ದಿಹೇಳಿ ಹೋಗುವವವರೆಗೂ ಚಟ ಬೆಳೆಸಿಕೊಂಡವರ ಬೆನ್ನು ಹತ್ತಿದ ಬೇತಾಳನಾಗಿ ಕಾಟಕೊಡುವುದು ಶತಸ್ಸಿದ್ಧ. ಆದರೂ ಸಹ ಧೂಮಪಾನ ಚಟವನ್ನು ಹೋಗಲಾಡಿಸಲು ಮಾರ್ಗೋಪಾಯಗಳು ಹಲವಾರಿವೆ. ಮೊದಲನೆಯದು ಆತ್ಮ ಬಲ ಅಂದರೆ ವಿಲ್ ಪವರ್, ಎರಡನೆಯದು ಔಷಧ. ಆಲೋಪತಿ, ಆಯುರ್ವೇದ, ಹೋಮಿಯೋಪತಿ ಮುಂತಾದ ಎಲ್ಲ ವೈದ್ಯಕೀಯ ಪದ್ದತಿಗಳಲ್ಲೂ ಧೂಮಪಾನ ತ್ಯಜಿಸುವುದಕ್ಕೆ ಔಷಧಗಳಿವೆ. ಔಷಧವನ್ನು ಸೇವಿಸಲು ಮನಸ್ಸಿರಬೇಕು, ಅದೇ ಮೊದಲ ಮದ್ದು. ಇವತ್ತು ಅಂದರೆ ಜುಲೈ 13ರ ಸೋಮವಾರ ಬೆಳಗ್ಗೆ 10 ಗಂಟೆಗೆ ಜೀ ಕನ್ನಡ ಚಾನೆಲ್ಲಿನಲ್ಲಿ ಒಂದು ಆರೋಗ್ಯ ಅಂಕಣ ಪ್ರಸಾರವಾಯಿತು. ಕಾರ್ಯಕ್ರಮದ ಇವತ್ತಿನ ವಿಶೇಷ - ಧೂಮಪಾನ ಚಟ ನಿವಾರಣೆಗೆ ಮನೆ ಮದ್ದು. ಡಾ. ಆದರ್ಶ ಎಂಬುವವರು ಅವರು ಹೇಳಿದ ಔಷಧ ರೆಸಿಪಿ ವಿವರಗಳನ್ನು ನಾನು ಬರೆದುಕೊಂಡೆ. ಅದು ಹೀಗಿವೆ. ಧೂಮಪಾನ ಮಾಡುವವರು ಸ್ವತಃ ಪ್ರಯೋಗ ಮಾಡಬಹುದು. ಅಥವಾ, 
ಅವರ ಪರವಾಗಿ ರೋಗಿಗೆ ಅತ್ಯಂತ ಬೇಕಾದವರು ಅಂದರೆ, ಹೆಂಡತಿ, ಅಕ್ಕ, ತಂಗಿ, ಸ್ನೇಹಿತರು ಯಾರಾದರೂ ತಯಾರಿಸಬಹುದು.

ಬೇಕಾಗುವ ಪದಾರ್ಥ :
2-3 ಹಿಪ್ಪಲಿ ತುಂಡುಗಳು
1/4 ಚಮಚ ಗಸಗಸೆ
1/4 ಕಲ್ಲು ಸಕ್ಕರೆ 
1/2 ಚಮಚ ಟೀಪುಡಿ

ಮಾಡುವ ವಿಧಾನ: ಒಲೆಯ ಮೇಲಿನ ಪಾತ್ರೆಯಲ್ಲಿ ಗಸಗಸೆ ಮತ್ತು ಹಿಪ್ಪಲಿಯನ್ನು ಬಾಕಿ ಸ್ವಲ್ಪ ಬೆಚ್ಚಗೆ ಮಾಡಬೇಕು. ಆನಂತರ ಒಂದು ಲೋಟ ನೀರು ಹಾಕಿ ಕುದಿಸಬೇಕು. ಕುದಿಯುವ ನೀರಿಗೆ ಕಲ್ಲುಸಕ್ಕರೆ ಮತ್ತು ಟೀ ಪುಡಿ ಹಾಕಿ ಮತ್ತಷ್ಟು ಕುದಿಸಬೇಕು. ತಳ ಹತ್ತದಂತೆ ಸೌಟಿನಲ್ಲಿ ಕೈಯಾಡಿಸುತ್ತಿರಬೇಕು. ಈ ಕಷಾಯವನ್ನು ಸೋಸಿ ಆನಂತರ ಅದಕ್ಕೆ ಅರ್ಧ ನಿಂಬೆಹಣ್ಣಿನ ರಸ ಹಿಂಡಬೇಕು. ಈ ಕಷಾಯವನ್ನು ಬೆಳಗ್ಗೆ ಮಾಡಿ ಕುಡಿದ ಪಕ್ಷದಲ್ಲಿ ಸಿಗರೇಟು ಬೀಡಿ ಸೇದುವುದಕ್ಕೆ ಸಾಧ್ಯವೇ ಇಲ್ಲ. ತಂಬಾಕಿನ ವಾಸನೆ ಬಂದಾಕ್ಷಣ ವಾಕರಿಕೆ ಬಂದು ಸಿಗರೇಟು ಸೇದುವ ಆಸೆ ಕಮರಿಹೋಗುತ್ತದೆ. ಎಷ್ಟೋ ಮಂದಿ ಧೂಮಪಾನ ಚಟಕ್ಕೆ ಬಲಿಯಾಗಿ ಸೇದಲಾರದೆ ಬಿಡಲಾರದೆ ನರಳುತ್ತಿರುತ್ತಾರೆ. ಅಂಥವರು ಗಟ್ಟಿ ಮನಸ್ಸು ಮಾಡಿ ಈ ಔಷಧ ಮಾಡಿ ಕುಡಿದು ಧೂಮಪಾನ ಚಟಕ್ಕೆ ಗುಡ್ ಬೈ ಹೇಳಬಹುದು. ಶ್ವಾಸಕೋಸದ ಅರ್ಬುದ ರೋಗ ಹತ್ತಿರ ಸುಳಿಯದಂತೆ ತಮ್ಮ ಆರೋಗ್ಯ ಸಂರಕ್ಷಿಸಿಕೊಳ್ಳಬಹುದು
.